ಮಾನ್ಯ ಸುಪ್ರೀಂ ಕೋರ್ಟಿನ ಆದೇಶಾನುಸಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ತಾತ್ಕಾಲಿಕ ಪರಿಷ್ಕೃತ ಪದಕ್ರಮ ಪಟ್ಟಿಗಳು . 2017-18 ನೇ ಸಾಲಿನಲ್ಲಿ-ಪೂರ್ಣಾವಧಿ ಪಿಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಹಾಗೂ ಶುಲ್ಕ ವಿನಾಯಿತಿಗೆ ಆರ್ಜಿ ಆಹ್ವಾನ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07.12.2017 . ಇಲಾಖೆ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳಿಗೆ ನೀಡಲಾಗುವ ಅಹಾರದ ಮೆನು ಚಾರ್ಟ್
ಹಿಂದಿನ ಪುಟಕ್ಕೆ
2016-17ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ/ದ್ವಿತೀಯ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡಿ ಮಾರ್ಚ್ ಮತ್ತು ಏಪ್ರಿಲ್ 2017 ರಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಶೇ.90 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮಾತ್ರ
ಪ್ರಕಟಣೆ
ಅಭ್ಯರ್ಥಿಗಳಿಗೆ ಸೂಚನೆಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು : 04.09.2017 ರ ವರೆಗೆ ವಿಸ್ತರಿಸಲಾಗಿದೆ.

ಅಭ್ಯರ್ಥಿಗಳಿಗೆ ಸೂಚನೆ:-2016-17ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ/ದ್ವಿತೀಯ ಪಿ.ಯು.ಸಿ. ಯಲ್ಲಿ ವ್ಯಾಸಂಗ ಮಾಡಿ ಮಾರ್ಚ್ ಮತ್ತು ಏಪ್ರಿಲ್ 2017 ರಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಶೇ.90 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ವಿವರಗಳು ಅರ್ಜಿಯಲ್ಲಿ Generate ಆಗದೇ ಇದ್ದಲ್ಲಿ ಅಂತಹ ಅಭ್ಯರ್ಥಿಗಳು ಹತ್ತನೆ ತರಗತಿಯ ಮೂಲ ಅಂಕಪಟ್ಟಿಯನ್ನು ಹತ್ತಿರದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಹೋಗಿ ಅಂಕಪಟ್ಟಿಯ ವಿವರಗಳನ್ನು Entry ಮಾಡಿಸಿ, ನಂತರ ಅರ್ಜಿ ಸಲ್ಲಿಸುವುದು.

ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ
ವಿದ್ಯಾರ್ಥಿಗಳಿಗೆ ಸೂಚನೆಗಳು (Instructions to the Students)
( ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ  ಈ ಸೌಲಭ್ಯವನ್ನು ಪಡೆಯಲು ಅವಕಾಶವಿರುವುದಿಲ್ಲ)

 • 2016-17ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ/ದ್ವಿತೀಯ ಪಿ.ಯು.ಸಿ. ಯಲ್ಲಿ ವ್ಯಾಸಂಗ ಮಾಡಿ ಮಾರ್ಚ್ ಮತ್ತು ಏಪ್ರಿಲ್ 2017ರಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಶೇ.90 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು.
 • ವಿದ್ಯಾರ್ಥಿಗೆ ನಿಗದಿಪಡಿಸಿರುವ  ಅರ್ಹತೆಗಳು:
 • ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
 • ಕರ್ನಾಟಕ ಸರ್ಕಾರ  ಅಧಿಸೂಚಿಸಿರುವ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿರಬೇಕು.
 • ಸರ್ಕಾರಿ/ಮಾನ್ಯತೆ ಪಡೆದ ಅನುದಾನಿತ/ಅನುದಾನ ರಹಿತ ಶಾಲೆ/ಕಾಲೇಜುಗಳಲ್ಲಿ (ಎಸ್.ಎಸ್.ಎಲ್.ಸಿ/ದ್ವಿತೀಯ ಪಿ.ಯು.ಸಿ) ವ್ಯಾಸಂಗ ಮಾಡಿರಬೇಕು.
 • ಸಮಾನ ಕೋರ್ಸ್ ಗಳಿಗೆ ಸಂಬಂಧಿಸದಂತೆ ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ  ಈ ಸೌಲಭ್ಯವನ್ನು ನೀಡಲಾಗುವುದು.
 • ವಿದ್ಯಾರ್ಥಿ ಮತ್ತು ಕುಟುಂಬದ  ಒಟ್ಟು ವಾರ್ಷಿಕ ಆದಾಯಮಿತಿ:

ಅ. ಪ್ರವರ್ಗ-1 – ರೂ.2.50 ಲಕ್ಷ
ಆ.ಪ್ರವರ್ಗ-2(ಎ), 3(ಎ) ಮತ್ತು 3(ಬಿ) – ರೂ. 1.00 ಲಕ್ಷ

 3.  ಪ್ರತಿಭಾ ಪುರಸ್ಕಾರದ ಮೊತ್ತ ಮತ್ತು ಭೌತಿಕ ಗುರಿ:-


ಕ್ರ. ಸಂ

ತರಗತಿ

ಪ್ರತಿಭಾ ಪುರಸ್ಕಾರದ ಮೊತ್ತ (ರೂ.ಗಳಲ್ಲಿ)

1

ಎಸ್.ಎಸ್.ಎಲ್.ಸಿ

10,000/-

2

ದ್ವಿತೀಯ ಪಿ.ಯು.ಸಿ

15.000/-

 •  ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿಯ  ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಮೀಸಲಾತಿಯ ವಿವರ
 • ಕ್ರ.ಸಂ

  ಪ್ರವರ್ಗ

  ಶೇಕಡಾವಾರು

  1

  1

  24%

  2

  2ಎ

  46%

  3

  3ಎ

  14%

  4

  3ಬಿ

  16%

   

  ಒಟ್ಟು

  100%

 • ಬಾಲಕಿಯರಿಗೆ ಶೇ:33 ಹಾಗೂ ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ:3 ರ ಮೀಸಲಾತಿಯನ್ವಯ ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರವನ್ನು ನೀಡಲಾಗುವುದು.
 • ಎಸ್.ಎಸ್ ಎಲ್.ಸಿ. ವಿದ್ಯಾರ್ಥಿಗಳಿಗೆ ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರವನ್ನು  ನೀಡುವ ಆದ್ಯತೆಯ  ವಿವರ.

ಕ್ರ. ಸಂ

ವಿವರ

ನಿಗದಿಪಡಿಸಿದ ಅನುದಾನ

ಷರಾ

1

 • ಸರ್ಕಾರಿ ಶಾಲೆ
 • ಅನುದಾನಿತ/ಅನುದಾನ  ರಹಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು

ಶೇ:50

ಕ್ರಮ ಸಂಖ್ಯೆ 1ರಲ್ಲಿ ಅರ್ಹ ವಿದ್ಯಾರ್ಥಿಗಳು ಲಭ್ಯವಾಗದೇ ಇದ್ದಲ್ಲಿ ಕ್ರಮ ಸಂಖ್ಯೆ 2ರ ವಿದ್ಯಾರ್ಥಿಗಳಿಗೆ ಅನುದಾನವನ್ನು ಮರು ಹಂಚಿಕೆ ಮಾಡಲಾಗುವುದು.

2

ಬಾಕಿ  ಉಳಿದ ವಿದ್ಯಾರ್ಥಿಗಳಿಗೆ, ಪ್ರವರ್ಗವಾರು/ಮೀಸಲಾತಿ/ಮೆರಿಟ್ ಆಧಾರದ ಮೇಲೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ಶೇ:50

  • ಅರ್ಜಿ ಸಲ್ಲಿಕೆ ಹಾಗೂ ಮಂಜೂರಾತಿ ವಿಧಾನ:-
  • ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕು. ಬೇರೆ ಯಾವುದೇ ರೀತಿಯ ಅರ್ಜಿ/ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.
  • ಅರ್ಜಿ ಸಲ್ಲಿಸುವಾಗ ಅಪ್-ಲೋಡ್ ಮಾಡಬೇಕಾದ ದಾಖಲೆಗಳು- ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ, ನಿಗದಿತ  ಅಂಕಪಟ್ಟಿಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ ಹಾಗೂ ವಿದ್ಯಾರ್ಥಿಯ ಹೆಸರಿನಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪುಟ (ಬ್ಯಾಂಕ್ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಶಾಖೆ ಮತ್ತು ಐ.ಎಫ್.ಎಸ್.ಸಿ. ಕೋಡ್ ಮಾಹಿತಿ) ಗಳನ್ನು ಪ್ರತ್ಯೇಕವಾಗಿ ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬೇಕು. (ಪ್ರತಿ ದಾಖಲೆಯು 100 kb JPG Format) ಇರಬೇಕು.
  • ಆನ್ ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯ ಪ್ರತಿ, ಅಪ್ ಲೋಡ್ ಮಾಡಿರುವ ದಾಖಲೆಗಳ ದೃಢೀಕೃತ ಪ್ರತಿಗಳನ್ನು ವಿದ್ಯಾರ್ಥಿ ಎಸ್.ಎಸ್.ಎಲ್.ಸಿ./ದ್ವಿತೀಯ ಪಿ.ಯು.ಸಿ. ಅಧ್ಯಯನ ಮಾಡಿರುವ ಶಾಲೆ/ಕಾಲೇಜುಗಳಿರುವ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಸಲ್ಲಿಸಿ, ಕೊನೆಯ ದಿನಾಂಕ: 05.09.2017 ರೊಳಗೆ ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳುವುದು.
  • ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ವಿದ್ಯಾರ್ಥಿಗಳು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿಯನ್ನು ಆನ್ ಲೈನ್ ಮೂಲಕ ಅಪ್ ಡೇಟ್ ಮಾಡುವುದು.
I Accept that I have gone through all the instructions
Online Application

Download Acknowledgement
ಸಹಾಯವಾಣಿ ಸಂಖ್ಯೆ 080-65970004
ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಮಯ: ಬೆಳಿಗ್ಗೆ:10.00 ರಿಂದ ಸಂಜೆ:5.30 ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 080-65970004